ಕನ್ನಡ ಸೌರಭ.

ಚಿಂತನ
ಅರ್ಥ-ವಿವರ್ಥಗಳ ಸಂಗಮ ಕ್ಷೇತ್ರವೇ ಪ್ರಕೃತಿ.
”ಸೃಷ್ಟಿಯ ಕುರಿತಾದ ವಿವರಣೆಯೇ ವಿಜ್ಞಾನ.
ಸೃಷ್ಟಿಕರ್ತನ ಕುರಿತಾದ ವಿವರಣೆಯೇ ಸುಜ್ಞಾನ
ಅಥವಾ ಅಧಾತ್ಮಿಕ ಜ್ಞಾನ.”-ಸತ್ಯ ಸಾಯಿ ಬಾಬಾ.
ಋಷಿ ವಾಕ್ಯ ದೊಡನೆ  ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ–ಮಂಕುತಿಮ್ಮ.
ಮಗುವಿನ  ದೃಷ್ಟಿ ತಾಯಿಯ ಮಾತೃತ್ವದ ಮೇಲೆ
ಇರುವುದಲ್ಲದೆ ಅವಳ ಯೌವನದ ಮೇಲಲ್ಲ.
–ಶರಚ್ಚಂದ್ರ.
”ಆದರ್ಶ ಪತ್ನಿಯರಾಗಲು ಸ್ತ್ರೀಯರು ಸೀತಾ,
ಸಾವಿತ್ರಿಯರ  ಆದರ್ಶವನ್ನಿಟ್ಟು ಕೊಳ್ಳಬೇಕು ಎನ್ನುತ್ತಾರೆ.
ಅಂದರೆ ಸ್ತ್ರೀಯರು ತಮ್ಮ ಯೋಗ್ಯತೆಯನ್ನು ಸಿದ್ಧ ಪಡಿಸಲು
ಅಪಹೃತರಾಗಬೇಕು ಇಲ್ಲವೇ ವಿಧವೆಯರಾಗಬೇಕು ಎಂದು
ಅವರು ಬಯಸುತ್ತಾರೆಯೇ?”–ಸರೋಜಿನಿ ನಾಯ್ಡು.
ನಿದ್ದೆ ಮಾಡುವವನು ಕಲಿಯುಗದವನು.
ಮೈ ಮುರಿಯುವವನು ದ್ವಾಪರಯುಗದವನು.
ನಿಂತಿರುವವನು ತ್ರೇತಾಯುಗದವನು.
ನಿರಂತರವಾಗಿ ಚಲಿಸುವವನು ಕೃತ ಯುಗದವನು.
–ಉಪನಿಷತ್ತು.
ನೆರಳಿಗೆ ಹೆದರಿ ದೀಪ ಆರುವುದೇ ?
ಮಿಂಚಿಗೆ ಹೆದರಿ ಕಾನನ ನಡುಗುವುದೇ ?
ಸಿಡಿಲಿಗೆ ಹೆದರಿ ಭೂಮಿ ನಡುಗುವುದೇ ?
ನಾಣ್ಣುಡಿ.
ಬೀದಿಯ ಕೂಸು ಬೆಳೆಯಿತು;ಕೋಣೆಯ ಕೂಸು
ಕೊಳೆಯಿತು.
ಜಗ ಇರುವಷ್ಟು ಕಾಲ ಜಗಳ ಇದೆ.
ಗದ್ದೆಗೆ ತೆವರಿ ಗಟ್ಟಿ ಇರಬೇಕು; ಹುಟ್ಟಿದ ಹೆಣ್ಣಿಗೆ
ತವರು ಗಟ್ಟಿ ಇರಬೇಕು.
ಒಕ್ಕಲಿಲ್ಲದ ಊರು, ಮಕ್ಕಳಿಲ್ಲದ ಮನೆಯು,
ಅಕ್ಕರಿಲ್ಲದ ತವರು ಇದ್ದು ಫಲವೇನು?
ಹಗಲು ರಾತ್ರಿ ಹೊಟ್ಟೆನೋವು ಅನುಭವಿಸಿ
ಹೆತ್ತದ್ದು ಒಂದೇ ಮಗು.
ಹಿತವಾಗಿ ಮಾತನಾಡುವವರ ಬಳಿ ಮತಿ ಮಾರಿ
ಕೊಳ್ಳಬೇಡ.
ಬಿದ್ದ ಮನೆಗೆ ಹದ್ದಿನ ಕಣ್ಣು.
ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿ ಶ್ಯಾವಿಗೆ
ಬೇಡಿದನಂತೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s