ಸಿರಿಗನ್ನಡ.

೧)ನುಡಿ ಸಿರಿ-
ಭಯವನೊತ್ತಿ  ನಡೆ; ಮೊಗವನೆತ್ತಿ ನಡೆ.
–ಸೇಡಿಯಾಪು ಕೃಷ್ಣ ಭಟ್ಟ.
ಭಗವಂತನಿಗೆ ಭೌತಿಕವಾದ ಜಡ ಆಕಾರವಿಲ್ಲ;
ಚೈತನ್ಯಮಯ ಆಕಾರವಿದೆ.
ಮೇಲಿದ್ದವರನ್ನು ಕೆಳಕ್ಕೆ ಆಕರ್ಷಿಸುವ ಶಕ್ತಿ
ಭೂಮಿ ತಾಯಿಗಿದ್ದರೆ, ಕೆಳಕ್ಕೆ ಬಿದ್ದವರನ್ನು
ಮೇಲೆತ್ತುವ ಶಕ್ತಿ ಶ್ರೀ ಕೃಷ್ಣನಲ್ಲಿದೆ.
–ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು.
”ಆಗಬಾರದು ಮನಸ್ಸು ಆಸೆಗಳ ಹುತ್ತ.
ಬದುಕು ಸರಿದೀತು ಅವನತಿಯತ್ತ.”
ಮಾನವನಿಗೂ ವಿಶ್ವಕ್ಕೂ ಇರುವ ಸಂಬಂಧ
ನಿರೂಪಣೆಯೇ  ಧರ್ಮ.
ಗುಂಡಗಿರುವ ಪ್ರಪಂಚವನ್ನು ಗೆಲ್ಲಲು ಗುಂಡ
ಗಿರುವ ಬುರುಡೆ(ತಲೆ) ಉಪ
ಯೋಗಿಸಬೇಕು.
೨)ಚಿಂತನ
ಎಲ್ಲ ೮ ಅಂಗಗಳಿಂದ ನಮಸ್ಕರಿಸುವುದು
ಸಾಷ್ಟಾಂಗ ನಮಸ್ಕಾರ.
ಜನ್ಮಾಂತರಗಳಿಂದ ಮಾಡಿದ ಪಾಪಗಳೆಲ್ಲ
ನಾಶವಾಗಲಿಕ್ಕಾಗಿ ಪ್ರದಕ್ಷಿಣ ವಿಧಿ ಇದೆ.
ನಿಸರ್ಗದಲ್ಲಿ ಎಲ್ಲ ಚಕ್ರೀಯ ಚಲನೆಗಳೂ
ಅಪ್ರದಕ್ಷಿಣವಾಗಿಯೇ ಇವೆ.ಭೂಮಿ ತನ್ನ
ಅಕ್ಷದಲ್ಲೇ ಸುತ್ತುವುದು ಅಪ್ರದಕ್ಷಿಣವಾಗಿ.
ಅದು ಸೂರ್ಯನನ್ನು ಸುತ್ತುವುದು ಅಪ್ರದಕ್ಷಿಣವಾಗಿ.
ಸಾಮಾನ್ಯವಾಗಿ ಎಲ್ಲ ಗ್ರಹ-ಉಪ ಗ್ರಹಗಳೂ ಹೀಗೆಯೇ.
ಇದು ನಿಸರ್ಗ ಸಹಜ ಗುಣ.ನಿಸರ್ಗ ವಿರೋಧಿಯಾಗಿ
ಬಾಳ ಬಾರದೆಂಬುದೇ ವೇದೋಪನಿಷತ್ತುಗಳ ಮುಖ್ಯ
ಸಂದೇಶ.ಹೀಗಿರುವಾಗ ದೇವರಿಗೆ ನಮಸ್ಕರಿಸುವಾಗ
ಬಲಕ್ಕೆ ಸುತ್ತುವ ಈ ಪ್ರದಕ್ಷಿಣ ವಿಧಿ ಏಕೆ?
೩)ನಗೆ ಗುಳಿಗೆ
”ಶಾಣ್ಯಾಕ್ ತೀನ್ ಕಡೆ ” ಎಂಬುದು ಮರಾಟಿ ಗಾದೆ.
ಅದರ ಅರ್ಥ ಹೀಗಿದೆ.ಕಾಲಿಗೆ ಅಂಟಿದ ಹೊಲಸನ್ನು
ಒಬ್ಬ ಕೈಗಂಟಿಸಿಕೊಂಡು ಪರೀಕ್ಷಿಸಿದನಂತೆ.
ಮತ್ತೊಬ್ಬ ಅದನ್ನು ಮೂಗಿಗಂಟಿಸಿ ವಾಸನೆ ನೋಡಿ
ಗ್ರಹಿಸಿದನಂತೆ. ಮತ್ತೊಬ್ಬ ನಾಲಿಗೆಯಿಂದ ನೆಕ್ಕಿ
ಪರೀಕ್ಷಿಸಿದನಂತೆ. ಅವನೇ ಬುದ್ಧಿವಂತ ಎಂಬುದು
ಗಾದೆ ಮಾಡುವ ಗೇಲಿ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s