ಹಾ! ಸವಿಗನ್ನಡ.

ಕವಿತೆ
೧)ಬಡವನಾರ್? ಮಡದಿಯೊಲವಿನ ಸವಿಯನರಿಯದವನು|
ಹುಡುಗರಾಟದಿ ಬೆರೆತು ನಗಲರಿಯದವನು|
ಉಡುರಾಜನೋಲಗದಿ ಕುಳಿತು ಮೈ ಮರೆಯದವನು|
ಬಡ ಮನಸೇ ಬಡತನವೋ–ಮರುಳ ಮುನಿಯ (ಡಿ.ವಿ.ಜಿ.)
೨)ಅವಳ ಕಣ್ಣಿನ ಕಡಲು  ನಕ್ಷತ್ರಗಳ ತವರು.
ಅವಳ ಕಂಠದ ತುಂಬ ಹಕ್ಕಿಗಳ ಹಾಡು.
ಅವಳ ಕೂದಲಿನಲ್ಲಿ ಅಮಾವಾಸ್ಯೆ ತುಂಬಿತ್ತು.
ಬೆಳದಿಂಗಳು ಕುಡಿದು ಬೆಳೆದಿದ್ದಳು.
ಕತ್ತುಕೊಂಕಿಸುವ ರೀತಿ ನವಿಲಿನಂತೆ.
ಶಿಲ್ಪದಂತಿದ್ದಳು ಅಮೃತಶಿಲೆಯ ಕೆತ್ತಿ ಕೆಡೆದಂತೆ.
ಈಗ ನರೆಗೂದಲಿನ ಮೂಳೆ ಚಕ್ಕಳದಾಕೆ
ಕಣ್ಣು ಮರುಳಾದಾಕೆ, ಇವಳೆ ಅವಳು?
೩)ಲೋಕದ ಕಣ್ಣಲ್ಲಿ ಇವಳು ನನ್ನ ಸತಿ.
ನಿಜದಲ್ಲಿ ಇವಳು ನನ್ನ ತನು, ಮನ
ಸಾಧನೆ, ಸವಲತ್ತು ಗಳಿಗೆಲ್ಲ ಅಧಿಪತಿ.
ಚಿಂತನ
ಕಾನೂನಿನ ತಕ್ಕಡಿ ಹಿಡಿದು ಕುಳಿತ ಚಿತ್ರ
ಹೆಣ್ಣಿನದಾದರೂ  ಕಾನೂನಿನ ತಕ್ಕಡಿ ತೂಗುವವರು
ಹೆಚ್ಚಾಗಿ ಗಂಡಸರೇ ಆಗಿದ್ದಾರೆ.
ಎಷ್ಟೇ ದೊಡ್ಡ ಬಿಂದಿಗೆಯಾದರೂ,ಕಂಡೂ ಕಾಣದಂಥ
ತೂತಾದರೂ ಪೂರ್ತಿ ಖಾಲಿಯಾಗುವುದು.
ನಗೆ ಬರಹ.
Press Conference ಗೆ ಇಸ್ತ್ರಿ ಹಾಕುವವ
ಹಾಜರಾಗಿದ್ದ.ಕೇಳಿದ್ದಕ್ಕೆ ”ಪೇಪರ್ ನಲ್ಲಿ ಓದಿದ್ದು
Press Conference ಉಂಟೆಂದು; ಅದಕ್ಕೋಸ್ಕರ
Press(ಇಸ್ತ್ರಿ)  ಮಾಡೋಣ ಅಂತ ಬಂದೆ.”ಎಂದುತ್ತರಿಸಿದ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s