ವಿಶ್ವಾಮಿತ್ರ.

ಛಲವಾದಿಯೂ, ವಸಿಷ್ಠರ ಸಿದ್ಧಾಂತಗಳ ವಿರೋಧಿಯೂ
ಆಗಿದ್ದ ಗಾಧೀಪುತ್ರ–ಬ್ರಹ್ಮರ್ಷಿ ವಿಶ್ವಾಮಿತ್ರರು ಶಕುಂತಲೆಯ
ತಂದೆಯಲ್ಲ ಎಂಬ ವಿಷಯ ಹೇಳಿದರೆ ಆಶ್ಚರ್ಯ ಪಡುವವರೇ
ಅಧಿಕ.
ಶಕುಂತಲಾ-ದುಷ್ಯಂತರ ಪುತ್ರ ಭರತನಿಂದ ಸುಮಾರು
ಆರನೆಯ ತಲೆ ಅಜಮೀಡ.ಅವನ ಇಪ್ಪತ್ತು ಮಕ್ಕಳಲ್ಲಿ ಜಹ್ನು
ಒಬ್ಬ. ಜಹ್ನುವಿನ ಮಗ ಸಿಂಧು ದ್ವೀಪ. ಅವನ ಮಗ ಬಲಾಕಾಶ್ವ.
ಇವನ ಪುತ್ರ ವಲ್ಲಭ.ಅವನ ಮಗ ಕುಶಿಕ. ಇವನ ಮಗ ಗಾಧಿ.
ಗಾಧಿಯ ಮಗ ವಿಶ್ವಾಮಿತ್ರ.ಕರ್ಣನ ಅಸ್ತ್ರ ವಿದ್ಯಾಗುರು
ಪರಶುರಾಮನ ತಂದೆ ಜಮದಗ್ನಿ. ಈತನ ತಾಯಿ ಸತ್ಯವತಿ
ವಿಶ್ವಾಮಿತ್ರನ ಸಹೋದರಿ.
ವಿಶ್ವಾಮಿತ್ರ ವಸಿಷ್ಠರ ಬದ್ಧ ವೈರಿ. ವೇದವ್ಯಾಸರ ಮುತ್ತಜ್ಜ
ವಸಿಷ್ಠರ ಹಲವು ಮಕ್ಕಳ ದುರ್ಮರಣದ ರೂವಾರಿ ವಿಶ್ವಾಮಿತ್ರ.
ಬದನೆಕಾಯಿ, ಈರುಳ್ಳಿ, ಎಮ್ಮೆ , ತ್ರಿಶಂಕು ಸ್ವರ್ಗ,ಗಾಯತ್ರಿ
ಮಂತ್ರಗಳ ಸೃಷ್ಟಿ ಕರ್ತ ವಿಶ್ವಾಮಿತ್ರ. ವಿಶ್ವಾಮಿತ್ರರ ಚರಿತ್ರೆಯು
ಮಹಾಭಾರತದ ಹಲವೆಡೆ ಕಂಡು ಬರುತ್ತದೆ. ಹಾಗಿರುವಾಗ
ಭರತನಿಂದ ಹಲವಾರು ವರ್ಷಗಳ ನಂತರ ಜನಿಸಿದ
ವಿಶ್ವಾಮಿತ್ರರು ಶಕುಂತಲೆಯ ತಂದೆಯಾಗುವುದು ಅಸಂಭವ.
ಮೂಲ:ಸಂಗ್ರಹ.
Advertisements

2 thoughts on “ವಿಶ್ವಾಮಿತ್ರ.

 1. ವಿಶ್ವಾಮಿತ್ರನ ಹೆಸರು ತ್ರೇತಾಯುಗದಲ್ಲೇ ಬರುತ್ತದೆ. ರಾಮನನ್ನು ಜನಕನ ಆಸ್ಥಾನಕ್ಕೆ ತಂದಿದ್ದೇ ವಿಶ್ವಾಮಿತ್ರ. ತ್ರಿಶಂಕು ಸ್ವರ್ಗದ, ತ್ರಿಶಂಕು ಶ್ರೀರಾಮನಿಗಿನಂತಲೂ 32 ತಲೆಮಾರು ಹಿಂದಿನ ಸೂರ್ಯವಂಶದರಸು. ಅಜಮೀಢ ಭರತನ ನಂತರ ಬರುವ ಚಂದ್ರವಂಶದರಸು ದ್ವಾಪರಯುಗ. ಬಹುಶಃ ನೀವು ಹೇಳುವ ವಿಶ್ವಾಮಿತ್ರ ಬೇರೆ ಯಾರೋ ಇರಬೇಕು…
  ಚಂದ್ರವಂಶದಲ್ಲೇ ನಿಮಗೆ ಇಬ್ಬರು ದುಷ್ಯಂತರು, ಇಬ್ಬರು ದೃತರಾಷ್ಟ್ರ, ಇಬ್ಬರು ಪಾಂಡು, ಇಬ್ಬರು ಜನಮೇಜಯ ಬರುತ್ತಾರೆ, ಹಾಗೇ ಯಾರೋ ವಿಶ್ವಾಮಿತ್ರ ಇರಬಹುದು.

  • ಮಾನ್ಯರೇ,
   ವೈದಿಕ ಸಾಹಿತ್ಯದ ಆಳವಾದ ಅಭ್ಯಾಸ ನಡೆಸಿ ಪ್ರಸ್ತುತ
   ಪಡಿಸಿರುವ ನಿಮ್ಮ ವಿಮರ್ಶೆ ನಿಜಕ್ಕೂ ಶ್ಲಾಘನೀಯ. ಶ್ರೀ
   ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಂಥಹ
   ಉದ್ದಾಮ ಪಂಡಿತರು ನಿಮ್ಮ ಜ್ಞಾನದಾಹವನ್ನು ತಣಿಸ ಬಲ್ಲ
   ಸಮರ್ಥರು ಎಂದು ಭಾವಿಸುತ್ತೇನೆ. ಉಡುಪಿಯಲ್ಲಿ ಹುಟ್ಟಿ
   ಬೆಳೆದವಳಾದ ನನಗೆ ಅವರ ಪಾಂಡಿತ್ಯದ ಬಗ್ಗೆ ಅಪಾರ
   ಗೌರವವಿದೆ. ನಾನು ಅಧ್ಯಯನ ನಡೆಸಿದಂತೆ ಸಪ್ತರ್ಷಿ
   ಗಳಲ್ಲಿ ಒಬ್ಬರಾದ ವಿಶ್ವಾಮಿತ್ರರ ಜೀವಿತಾವಧಿ ಒಂದು ಮನ್ವಂತರ.
   ಅಂದರೆ ೩೦೬,೭೨೦,೦೦೦ ಭೂಮಿ ವರ್ಷಗಳು.
   ಅಭಿನಂದನೆಗಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s