ಲೋಕೋಕ್ತಿ ಸಂಗ್ರಹ.

ಮುತ್ತಿನಂಥ ಮಾತನ್ನಾಡುವಾತನಿಗೆ ಮುತ್ತಿಗೆ
ಬೀಳುತ್ತಾರೆ ಜನ.
ಹೇಳುವುದೆಲ್ಲಾ ಪುರಾಣ;ಮಾಡುವುದೆಲ್ಲಾ ಹಗರಣ.
ಅಬ್ಬೆಗೆ(ತಾಯಿಗೆ) ಸುಖವಾದರೆ ಗಬ್ಬಕ್ಕೂ (ಗರ್ಭಸ್ಥ
ಶಿಶು)ವಿಗೂ  ಸುಖ.
ಗೂಳಿ ನಡೆವ ಹೆಜ್ಜೆ ತೋರುವದಲ್ಲದೆ ಗಾಳಿಯ ಹೆಜ್ಜೆ
ತೋರುವದೆ?
ಒಂಟಿಯಲಿ ಹೆಂಡತಿಯ ಬಿಡುವಾತ ಮೂರ್ಖ;
ಗಂಟನೊಬ್ಬರ ಕೈಲಿ ಕೊಡುವಾತ ಮೂರ್ಖ.
-ಪುರಂದರದಾಸರು.
ತುರುಕರಿಲ್ಲದ(ದನ-ಕರು)ಗಳಿಲ್ಲದ ಊರು ನರಕ
ಭಾಜನಮಕ್ಕು.
ಸತ್ಯವಾದಿ ಲೋಕ ವಿರೋಧಿ.
ಮುಸುಡಿ ಚಾಚಲು ಎಡೆ ಬೇಡಿ, ಕೊನೆಗೆ ಡೇರೆ
ಯಲ್ಲೆಲ್ಲಾ  ಕಾಲುಚಾಚಿ ಮಲಗಿದ ಒಂಟೆಯ ಕತೆಯಂತೆ.
ಕಬ್ಬಿಣವನ್ನು ಸ್ಪರ್ಶಮಣಿ ಚಿನ್ನವನ್ನಾಗಿ ಮಾಡೀತು;ಆದರೆ
ಇನ್ನೊಂದು ಸ್ಪರ್ಶಮಣಿಯನ್ನಾಗಿ ಮಾಡಲಾರದು.
ಅಂಬಲಿಗೂ ಗತಿಯಿಲ್ಲದವನಿಗೆ ಹಂಬಲವಾದರೂ
ಯಾಕೆ?
ಅಂಬಲಿ ಕುಡಿಯುವವನಿಗೆ ಮೀಶೆ ತಿಕ್ಕುವವನೊಬ್ಬ.
ಅರಸ ಎಂದರೆ ಊರು ನಡುಗುತ್ತದೆ.ಮುದುಕ ಅಂದರೆ
ಗಡ್ಡ ನಡುಗುತ್ತದೆ.
ಅಜ್ಜಿ ಇದ್ದವನಿಗೆ ಯೋಚನೆಯಿಲ್ಲ; ಕಜ್ಜಿ ಇದ್ದವನಿಗೆ
ಲಜ್ಜೆ ಇಲ್ಲ.
ಅಜ್ಞನ ಬುದ್ಧಿ ಮೊಗ್ಗಿನ ಹಾಗೆ; ಪ್ರಾಜ್ಞನ ಬುದ್ಧಿ
ಫಲದಹಾಗೆ.
ಅಜ್ಞಾತವಾಸದಲ್ಲಿದ್ದರೂ ಅಜ್ಞಾನಿಗಳ ಕಾಟ ತಪ್ಪಲಿಲ್ಲ.
ಅಂಗಾಲಿನಲ್ಲಿ ತ್ರಾಣ ಇದ್ದರೆ ಬಂಗಾಲಕ್ಕೂ
ಹೋಗ ಬಹುದು.
ಅಡಿಗೆಯ ಗುಣ ಸಾರಿನಲ್ಲಿ ನೋಡು. ಮಡಿ
(ದರ/ಸಾಲಾಗಿ ನೆಡು)ಗಳ ಗುಣ ಫಲದಲ್ಲಿ ನೋಡು.
ಅಂಟವಾಳದ ಕಾಯಿಗೆ ಬಂಟವಾಳಕ್ಕೆ ಹೋಗ ಬೇಕೇ?
ಅಂತ್ಯವಿಲ್ಲದ ಕಡೆಯಿಲ್ಲ;ಆದಿಯಿಲ್ಲದ ಆರಂಭವಿಲ್ಲ.
ಅಂದು ಬಾರಯ್ಯಾ ಅಂದರೆ ಮಿಂದು ಬಂದೆ ಎಂದನಂತೆ.
ಅಂಚಿನಲ್ಲಿ ಹೋದರೆ ಮಿಂಚಿನ ಭಯ ತಪ್ಪೀತೇ?
ಅಮಟೇ ಮರಕ್ಕೆ ತಮಟೆ ಕಟ್ಟಿದಂತೆ.
ಅರ್ಥಕ್ಕೆ ಕಡಿಮೆಯಾದರೂ ಅನರ್ಥಕ್ಕೆ ಕಡಿಮೆಯಿಲ್ಲ.
ಅರಿಯೆನು ಎಂಬುದು ಅರುವತ್ತು ಗುಣ.ಕಾಣೆನು
ಎಂಬುದು ಕೋಟಿ ಗುಣ.
ಅಂಬೋಕೆ ಮಾಡಿದ್ದು ಶಾಸ್ತ್ರ ; ಉಂಬೋಕೆ
ಮಾಡಿದ್ದು ಅನ್ನ.
ಅಂಬಾರಿಯಲ್ಲಿ ಕೂತರೂ ಮುಂಗಾರು ಬಿಡಲಿಲ್ಲ.
ಅಗ್ರಹಾರಕ್ಕೆ ಹೋದರೂ ದುರಾಗ್ರಹ ಬಿಡಲಿಲ್ಲ.
ಅಲಲಾ ಅನ್ನೋ ಅರಳೀ ಮರ ನಂಬ ಬಹುದು.
ಮೆತ್ತಗಿರುವ ಕಳ್ಳೀ ಮರ ನಂಬಲಾಗದು.
”ಉಪ್ಪಿಲ್ಲದೂಟ, ತಾಯಿಲ್ಲದ ತವರು” ಮನೆಯೂ
ಸಪ್ಪೆ; ಮನವೂ ಸಪ್ಪೆ.
ಅಟ್ಟಿಕ್ಕುವವರಿಗಿಂತ ಆರಿಸಿಕ್ಕುವವರು ಮೇಲು.
ಅಟ್ಟು೦ಬೋದಕ್ಕಿಂತ ತಿರಿದುಂಬೋದು ಪರಮ ಸುಖ.
ಕಟ್ಬಿಟ್ರೆ ಕುರಿ; ಕಿತ್ಕೊಂಡ್ರೆ ಕಿರುಬ!
ಎಡವದ ಕಾಲುಂಟೇ? ತೊದಲದ ಮಾತುಂಟೇ?
ಯೋಗ್ಯರಿಗೆ ಸತ್ಕಾರ; ಅಯೋಗ್ಯರಿಗೆ  ಫೂತ್ಕಾರ!
ಭರ್ಜರಿಯಿಂದಲಿ ಘರ್ಜನೆ ಮಾಳ್ಪುದು
ದರ್ಜಿಯ ಮನೆಯಲಿ ಮಾರ್ಜಾಲ.
ಸಿದ್ದ ಮನ್ನಂ ಪರಿತ್ಯಜ್ಯ(ಸಿದ್ಧ ಪಡಿಸಿದ ಭೋಜನವನ್ನು
ತಿರಸ್ಕರಿಸಿ ) ಭಿಕ್ಷಾಮಟತಿ ದುರ್ಮತಿ (ಭಿಕ್ಷಾಟನೆಗೆ
ಹೊರಟ ಮೂರ್ಖನಂತೆ).
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s