ಅಧ್ಯಾಪಕರ ದಿನ.

ಡಾ|ಸರ್ವಪಲ್ಲಿ (ಮನೆತನದ ಹೆಸರು)ರಾಧಾಕೃಷ್ಣನ್ ,
(ಭಾರತದ ಮಾಜಿ ರಾಷ್ಟ್ರಪತಿ, ಅಧ್ಯಾಪಕ,ತತ್ತ್ವಜ್ಞಾನಿ)
ಅವರ ಜನ್ಮದಿನ (ಸಪ್ಟೆಂಬರ್ ೫, ೧೮೮೮; ಹುಟ್ಟೂರು-
ತಿರುತ್ತಣಿ ,ಚೆನ್ನೈ)ವನ್ನು ಪ್ರತಿ ವರ್ಷ ಅಧ್ಯಾಪಕರ ದಿನ
ವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತದೆ.
ಉತ್ತರದ ಪ್ರಜೆ (ಮುಂದಿನ ಜನಾಂಗ)ಗಳಲಿ
ಮಹತ್ತರದ ಬೀಜ(ಅಕ್ಷರಾಭ್ಯಾಸ) ಬಿತ್ತುವ
ಈ ಎತ್ತರದ ಮಂದಿ (ಅಧ್ಯಾಪಕರು)ಯನ್ನು
ಅಭಿನಂದಿಸೋಣ  ಏಳಿ.
ಶಿಕ್ಷಕರ ದಿನದ ಶುಭಾಶಯಗಳನು ಹೇಳಿ.
-ವಿಶ್ವನಾಥ ಕುಲಾಲ್ ಮಿತ್ತೂರ್.
ಋಜು ವಿದ್ಯಾಭ್ಯಾಸ  ಎಂದರೆ–
ವಿಶ್ವ ಸತ್ಯವನ್ನು ದರ್ಶಿಸುವಾತ ಋಷಿ.
ಋಷಿ ದರ್ಶಿಸಿದ ಸತ್ಯಕ್ಕೆ ವ್ಯಾಖ್ಯಾನ ಬರೆವಾತ
ಆಚಾರ್ಯ.ಆಚಾರ್ಯ ಬರೆದ ವ್ಯಾಖ್ಯಾನವನ್ನು
ಬುದ್ಧಿಗತ ಮಾಡಿಕೊಂಡು ಬೋಧಿಸುವಾತ ಗುರು.
ಗುರು ಬೋಧನೆ ಆಲಿಸಿ ವರ್ಧಿಸುವಾತ ಶಿಷ್ಯ.
ಶಿಷ್ಯ ಋಷಿಯಾಗುವುದೇ ಋಜು ವಿದ್ಯಾಭ್ಯಾಸ.
ಪ್ರೊಫೆಸರ್.ಎಸ್ ಕೆ.ರಾಮಚಂದ್ರ ರಾಯರು.
ಶಿಕ್ಷಕರಿಗೆ ಪಂಚ ಶೀಲಗಳು :
೧)ಸರ್ವತ್ರ ಪರಿಶುದ್ಧ ಶೀಲಾನುಷ್ಠಾನ ೨)ಅಧ್ಯಯನದಲ್ಲಿ
ಅದಮ್ಯ ಕುತೂಹಲ ೩)ಜ್ಞಾನ ಬೋಧನೆಯಲ್ಲಿ ಸ್ಪಷ್ಟತೆ
೪)ವಿದ್ಯಾರ್ಥಿಯ ಸುಪ್ತ ಪ್ರತಿಭೆಯನ್ನು ಗುರುತಿಸಿ
ಪ್ರೋತ್ಸಾಹಿಸುವುದು. ೫)ಎಲ್ಲರೊಳಗೊಂದಾಗಿ
ವರ್ತಿಸುವುದು.
ಶಿಕ್ಷಣ:ಇರಬೇಕಾದ ಗುಣಗಳು-
೧)ಕಠಿಣ ಶ್ರಮ ಹಾಗೂ ಶ್ರಮ ಗೌರವದ
ಸಂಸ್ಕೃತಿಯನ್ನು ಬೆಳೆಸಲಾಗದಿದ್ದರೆ  ಕೊಟ್ಟ
ವಿದ್ಯೆ ನಿರರ್ಥಕ.
೨)ಬಹುಧರ್ಮೀಯವೂ, ಬಹುಭಾಷಿಕವೂ ಆದ
ಈ ದೇಶದಲ್ಲಿ ಕೋಮುವಾದಿ ಚಿಂತನೆ ಎಂಬುದು
ಸಹ ಬಾಳ್ವೆಯ ಬೇರುಗಳನ್ನೇ ಕಿತ್ತೆಸೆಯುವ
ಬಿರುಗಾಳಿ. ಹೀಗಾಗಿ ನಾವು ಮಕ್ಕಳಿಗೆ ನೀಡುವ
ಶಿಕ್ಷಣವು ಸಹನೆ,ಗೌರವ ಹಾಗೂ ಧರ್ಮ ನಿರಪೇಕ್ಷತೆ
ಯನ್ನೂ ಕಲಿಸಬೇಕು.
೩)ಬ್ರೆಡ್ಡು–ಬೆಣ್ಣೆ ಒದಗಿಸುವುದೇ ಶಿಕ್ಷಣದ ಅಂತಿಮ
ಗುರಿಯಲ್ಲ.ವ್ಯಕ್ತಿತ್ವದ ಸರ್ವಾಂಗೀಣ ವಿಕಾಸ,
ಸಂಸ್ಕಾರಯುತ ವ್ಯಕ್ತಿಗಳ ನಿರ್ಮಾಣ, ಭವಿಷ್ಯದ
ಸವಾಲುಗಳನ್ನು ವಿವೇಚನೆಯಿಂದ ಎದುರಿಸಬಲ್ಲ
ಭಾವೀ ಜನಾಂಗದ ನಿರ್ಮಾಣವೇ ಶಿಕ್ಷಣದ ಘನ
ಉದ್ದೇಶವಾಗಬೇಕು.
೪)ಮಾಹಿತಿ ಪ್ರಸಾರ ಒಂದೇ ಶಿಕ್ಷಣದ ಗುರಿಯಲ್ಲ.
ಮೌಲ್ಯಾಧಾರಿತ ಶಿಕ್ಷಣ ಪ್ರಸಾರವಾಗಬೇಕು.
೫)ಶಿಕ್ಷಣ ಏಕಕಾಲಕ್ಕೆ ಸಮಾಜಮುಖಿಯೂ
ಉದ್ಯೋಗಮುಖಿಯೂ ಆಗಬೇಕು.
ಶಿಕ್ಷಣ ಎಲ್ಲರಿಗೂ ರಕ್ಷೆಯಾಗಬೇಕು ಹೊರತು
ಶಿಕ್ಷೆಯಾಗಬಾರದು.
ತುಂಟರೊಡನೆ ನಂಟುತನವಿರಬೇಕು.
ಶಿಕ್ಷಿಸಿ ತಿದ್ದುವುದು ತರವಲ್ಲ.
ನೋವನ್ನುಂಟುಮಾಡುವ ಕಲೆಯಲ್ಲಿ ಕಳೆಯಿಲ್ಲ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s