ರಂಜಾನ್.

ಕುರಾನ್ (ಮುಸ್ಲಿಂ ಪವಿತ್ರ ಗ್ರಂಥ)ದೇವನಿಂದ ಪ್ರವಾದಿ
ಮಹಮ್ಮದ್ ರಿಗೆ  ನೀಡಲ್ಪಟ್ಟ ಗ್ರಂಥ-ಭೂಮಿಗೆ ಬಂದ
ತಿಂಗಳು ರಂಜಾನ್.(ಇಸ್ಲಾಮೀ ಕ್ಯಾಲೆಂಡರ್ ನ 9ನೇ
ತಿಂಗಳು) ಇದು ಉಪವಾಸ ವ್ರತದ ತಿಂಗಳು.
ಮುಂಜಾವಿನಿಂದ ಸಂಜೆಯವರೆಗೆ ಆಹಾರ, ಪಾನೀಯ,
ವಿಷಯಾಸಕ್ತಿಗಳ ವರ್ಜನೆಗೆ ಉಪವಾಸ ವ್ರತ ಎನ್ನುತ್ತಾರೆ.
ರಂಜಾನ್ ನ ವಿಧಿಗಳಲ್ಲಿ ಸಹ್ರೀ (ಪ್ರಭಾತಕ್ಕೆ ಮೊದಲು g
ಉಪಾಹಾರ) ಮತ್ತು ಇಫ್ತಾರ್ (ಮುಸ್ಸಂಜೆಯ ಪಾರಣೆ )
ಮುಖ್ಯ.ವೃದ್ಧರು, ರೋಗಿಗಳು, ಗರ್ಭಿಣಿಯರು,ಮಕ್ಕಳು
ಹಾಗೂ ಎದೆ ಹಾಲುಣಿಸುವ ತಾಯಂದಿರು  ಇವರಿಗೆ
ವಿನಾಯಿತಿ ಇದೆ.
ಉಪವಾಸವು ಕೆಡುಕಿನಿಂದ ರಕ್ಷಿಸುವ  ಗುರಾಣಿಯಾಗಿದೆ.
–ಪ್ರವಾದಿ ಮೊಹಮ್ಮದ್.
ಉಪವಾಸ ವ್ರತದ ಉದ್ದೇಶ ಜೀವನವನ್ನು ಸಂಸ್ಕರಿಸುವುದು.
ಎಲ್ಲ ಕೆಡುಕುಗಳಿಂದ ದೂರವಿರಲು ಪ್ರಯತ್ನಿಸುವುದು
ಮತ್ತು ಜೀವನ ಪೂರ್ತಿ ಇದನ್ನು ಪಾಲಿಸುವುದು
ಹಾಗಿದ್ದಲ್ಲಿ ಮಾತ್ರ ರಂಜಾನ್ ಉಪವಾಸ ಸಾರ್ಥಕ.
ಫ್ರೌಡರಿಗೆ ಉಪವಾಸ ಕಡ್ಡಾಯ.ಸತ್ಯಸಂಧತೆ ಮತ್ತು
ಆತ್ಮಾವಲೋಕನದೊಂದಿಗೆ  ರಂಜಾನ್ ಉಪವಾಸ
ಆಚರಿಸಿದರೆ ಅವರ ಗತ ಪಾಪಗಳನ್ನು ಅಲ್ಲಾಹನು
ಕ್ಷಮಿಸುವನು.
ರಂಜಾನ್ ನ ಪ್ರಥಮ ಹತ್ತು ದಿನಗಳು ”ರಹಮತ್”
(ಅನುಗ್ರಹಯುಕ್ತ) ದಿನಗಳೆಂದೂ,ಮಧ್ಯದ ಹತ್ತು
ದಿನಗಳು ಕ್ಷಮಿಸಲ್ಪಡುವ ದಿನಗಳೆಂದೂ,ಕೊನೆಯ
ಹತ್ತು ದಿನಗಳು”ನರಕ ವಿಮೋಚನೆ”ಯ ದಿನಗಳೆಂದೂ
ಪರಿಗಣಿಸಲ್ಪಟ್ಟಿವೆ.”ನರಕ ವಿಮೋಚನೆ”ಯ ದಿನಗಳಲ್ಲಿ
ಬರುವ ಒಂದು ರಾತ್ರಿ –ಲೈಲಾತುಲ್ ಖದರ್ –ಶ್ರೇಷ್ಠ,
ಮಹತ್ವಪೂರ್ಣ ಹಾಗೂ ನಿರ್ಣಾಯಕ ರಾತ್ರಿ.ಅಂದು
ಕುರಾನ್ ಅವತೀರ್ಣಗೊಂಡ ರಾತ್ರಿ.
ರಂಜಾನ್ ರಾತ್ರಿಗಳಲ್ಲಿ ಮುಸ್ಲಿಮರು ಮಸೀದಿಗೆ ತೆರಳಿ
”ತರಾವೀಹ್ ”ಎಂಬ ಸಾಮೂಹಿಕ ನಮಸ್ಕಾರವನ್ನು
ನಿರ್ವಹಿಸುತ್ತಾರೆ.
ಈದ್-ಉಲ್ -ಫಿತರ್ ನಂದು ಇಸ್ಲಾಂ ವಿಧಿಸಿರುವ
”ಫಿತ್ರ್   ಝಕಾತ್”'(ಸಂಪತ್ತಿನ ಒಂದಂಶವನ್ನು ದಾನ
ಮಾಡುವುದು ) ಎಂಬ ನಿರ್ಬಂಧ ದಾನವು ಬಡವರೂ
ಹಬ್ಬದಲ್ಲಿ ಪಾಲ್ಗೊಂಡು ಸಂತೋಷ ಪಡಬೇಕೆಂಬ
ಸದುದ್ದೇಶವನ್ನು ಹೊಂದಿದೆ.
ಹಜ್(ಮೆಕ್ಕಾ ಯಾತ್ರೆ),ತರಾವೀಹ್ (ದಿನಕ್ಕೆ ಐದು ಬಾರಿ
ನಮಾಜ್), ರಮ್ಜಾನ್ ಉಪವಾಸ, ಝಕಾತ್(ಸಂಪತ್ತಿನ
ಒಂದಂಶವನ್ನುಪ್ರತಿ ವರ್ಷ ದಾನ ಮಾಡುವುದು)  ಅಲ್ಲದೆ
ಪ್ರತಿಯೊಂದು ಸತ್ಕರ್ಮ ಹಾಗೂ ಸಮಾಜ ಸೇವೆಯನ್ನು
ಇಸ್ಲಾಂ ಧರ್ಮ ಆರಾಧನೆ ಎನ್ನುತ್ತದೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s