ಶ್ರೀ ಗಣೇಶ.

ಕವಿಗಳ ಕವಿ ಗಣರಾಜ.ಆತ ಆದಿ ಪೂಜ್ಯ.
ಭಾರತೀಯ ಸಂಸ್ಕೃತಿಯ ಭಾಷ್ಯ  ಶ್ರೀ ಗಣೇಶ.
ಆತ ವಿ-ನಾಯಕ.ವಿಶೇಷತೆಯುಳ್ಳ ನಾಯಕ
ಮತ್ತು ಅವನಿಗಿಂತ ದೊಡ್ಡ ನಾಯಕರಿಲ್ಲ.
ಗಣೇಶ ಗಾಯತ್ರಿ:
ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀ ಮಹಿ
ತನ್ನೋ ದಂತಿ ಪ್ರಚೋದಯಾತ್
(ಏಕದಂತನನ್ನುತಿಳಿದು, ವಕ್ರತುಂಡನ ಚರಿತ್ರೆ
ಯನ್ನು ಬುದ್ಧಿಯಲ್ಲಿ ಅವಲೋಕಿಸಿ ದಂತಿಮೊಗ
ನಿಂದ ಬಾಳಿಗೆ ಪ್ರಚೋದನೆಯನ್ನು ಪಡೆವ ಇಂಗಿತವಿದೆ.)
ವ್ಯಾಸ ಭಾರತದ ಲಿಪಿಕಾರ, ಲೇಖಕನೆಂದು ಪ್ರತೀತಿ
ಇರುವ  ಗಣಪತಿ ಭಾರತೀಯ ಬಹುತ್ವದ ಜೀವಂತ ಮೂರ್ತಿ.
ಆನೆಯ ಶಕ್ತಿ, ಮಾನವನ ತೋಳ್ಬಲ, ಇಲಿಯ
ಚಲನಶೀಲತೆ, ಹಾವಿನ ಸೂಕ್ಷ್ಮಜ್ಞತೆಗಳು ಒಂದಾದ
ಸಮತೋಲನದ ದೇಹಸ್ಥಿತಿ-ಇದು ಗಣಪನ ಭೌತಿಕ
ವಾದ ರೂಪ.
ಪಾರಮಾರ್ಥಿಕವಾಗಿ ಆತನ ವ್ಯಕ್ತಿತ್ವ-ಮಣ್ಣಿನಿಂದಲೇ
ಮೈ ಪಡೆದ, ಮೋದಕ ಹಸ್ತನಾಗಿ, ಈ ಜಗತ್ತಿನ ಅನ್ನಕ್ಕೆ,
ಮನುಷ್ಯ ದಿನನಿತ್ಯ ಪರದಾಡುವ ಆಹಾರಕ್ಕೆ ಪ್ರತಿಮೆ
ಯಾದ. ಆನೆ ಮತ್ತು ಮನುಷ್ಯನ ಸಂಯೋಗವಾದ
ದೇಹದಲ್ಲಿ ಇದ್ದು, ಹಾವು-ಇಲಿಯಂಥ ವಿರೋಧಿಗಳನ್ನು
ತನ್ನಲ್ಲಿ ಸಮಾನವಾಗಿ ಇರಿಸಿಕೊಂಡು ದೈವಿಕ ಅಸ್ತಿತ್ವಕ್ಕೆ
ಉದಾಹರಣೆಯಾದ.
ಆತ ಓಂಕಾರ ರೂಪಿ. ಓಂಕಾರವು ಸಕಲ ಭಾರತೀಯ
ಮತಗಳಿಗೆ ಉಪಾಧೇಯವಾದುದರಿಂದಲೇ ಗಣೇಶನೂ
ಸರ್ವವ್ಯಾಪಿ ಮತ್ತು ಸರ್ವತಂತ್ರ ಮಾನ್ಯ.
ಆದಿ,ಅನಾದಿ,ಬ್ರಹ್ಮಚಾರಿ ಎಂದೇ ಗಣಪತಿಯು ಪ್ರಸಿದ್ಧ.
ಆದರೂ ಸಿದ್ಧಿ,ಬುದ್ಧಿಯರೆಂಬ ಇಬ್ಬರು ಆತನ ಪತ್ನಿಯರು.
ಗಣಪತಿ ಸಿದ್ಧಿ ಪ್ರದಾಯಕ, ಬುದ್ಧಿದಾಯಕ  ಅಂದರೆ
ಇಚ್ಛಾಸಿದ್ಧಿಗೂ, ಬುದ್ಧಿಗೂ(ವಿವೇಕ)ರಮಣ. ಈ ರಮಣಿಯರು
ಸಾಂಕೇತಿಕ.ಇದು ಅಮೂರ್ತ. ಮೂರ್ತೀಕರಣದ
ಭಾರತೀಯತಾ ನ್ಯಾಯ.
ರುದ್ರನನ್ನು ಗಣಪತಿ ಎಂದದ್ದೂ ಇದೆ. ಆತನಿಗೆ ಲಿಂಗ
ರೂಪದಲ್ಲೂ ಮೂರ್ತಿರೂಪದಲ್ಲೂ ಪೂಜೆಗಳು ಸಲ್ಲುತ್ತವೆ.
ಗಣೇಶನು ಗ್ರಾಮರಕ್ಷಕ ದೇವತೆಯೂ ಹೌದು ಮತ್ತು ಯಕ್ಷ
ನಾಯಕ.
ವಿನಾಯಕನು ಏಕದಂತ.ಏಕ (ಪೂರ್ಣ ಏಕ/ಉನ್ನತ ಫಲ)
ವನ್ನು ”ದ”(ಕೊಡುವವ); ಪರಶಿವನಂತೆ ಶಿವಸುತನೂ
ಚಂದ್ರಧರ.
ಕಬ್ಬಿನ ತೋಟವನ್ನು ಉಧ್ವಸ್ಥಗೊಳಿಸುವ ಆನೆ, ಧಾನ್ಯಗಳನ್ನು
ಧ್ವಂಸ ಮಾಡುವ ಇಲಿ -ಇವುಗಳ ಸಂಯುಕ್ತ ಆರಾಧನಾ ರೂಪ –
”ಆನೆ-ಇಲಿ ದೇವರು”.
ಇಲಿ ದೊಡ್ದದೇವರ ಪುಟ್ಟ ವಾಹನ. ಭಯ, ಪುಕ್ಕಲುತನ
ಸಂದೇಹ ಪಡುವಂಥ ಗುಣಗಳನ್ನು ಸಂಕೇತಿಸುವ
ಇಲಿಯ ಮೇಲೆ ಪ್ರಭುತ್ವ ಅಥವಾ ನಿಯಂತ್ರಣ ಸಾಧಿಸಿ
ಆತ್ಮ ಸ್ಥೈರ್ಯ ವನ್ನು ನಮ್ಮೊಳಗೆ ಮೂಡಿಸುವವನು
ಎಂಬುದು ಈ ಮೂಷಿಕ ವಾಹನನ ನಿಲುವಿನ
ಸಾಂಕೇತಿಕ ಅರ್ಥ.
ಮುದ್ಗಲ ಪುರಾಣದಲ್ಲಿ ವರ್ಣಿಸಿರುವ ಗಣಪನ  ಏಳು
ಅವತಾರಗಳಲ್ಲಿ ಮೊದಲ ಮೂರಕ್ಕೆ ಮೂಷಿಕ ವಾಹನವಿಲ್ಲ.
ಏಳನೇ ಶತಮಾನ ದಿಂದೀಚೆಗೆ ವಿಘ್ನಕಾರಕಪ್ರಾಣಿ ಇಲಿಯನ್ನು
ವಿಘ್ನೇಶ್ವರನ ವಾಹನವಾಗಿ ರೂಪಿಸುವ ಕಲ್ಪನೆ ಬೆಳೆದು
ಬಂದಿತೆಂದು ಕಲಾಚರಿತ್ರಕಾರರ ವಾದ.
ಬಾದಾಮಿಯ ವಾತಾಪಿಪುರ ಎಂಬಲ್ಲಿ ಒಂದು ಗಣೇಶನ
ದೇವಸ್ಥಾನವಿದೆ. ಆ ಗಣಪತಿ ಸಮಸ್ತ ಸಂಗೀತದ ನಿಧಿ
ಎಂದು ಪರಿಗಣಿಸಲ್ಪಟ್ಟಿದ್ದಾನೆ.ಹಾಗಾಗಿಯೇ ”ವಾತಾಪಿ
ಗಣಪತಿಂ ಭಜೇ” ಎಂದು ಮುತ್ತುಸ್ವಾಮಿ ದೀಕ್ಷಿತರು
ಹಾಡಿದರು. ಗಣಪತಿಗೆ ಆತನ ತಾಯಿ ಗೌರಿಯೇ
ಸಂಗೀತ ದೇವತೆ.
ವಿನಾಯಕನನ್ನು ಮೂರುನೆಲೆಗಳಿಂದ ಪರಿ ಭಾವಿಸುತ್ತಾರೆ.
ವೈದಿಕ ಪರಿಗಣನೆಯಂತೆ ಆತ ವೇದೋಕ್ತ ದೈವ.
ಪೌರಾಣಿಕ /ಆಗಮಿಕ ಪರಿಗಣನೆಯಂತೆ ಆತ ಶಿವ ಸುತ ;
ಗೌರೀ ಪುತ್ರ.ಮೂರನೆಯ ಪರಿಗಣನೆಯಂತೆ ಆತ ವ್ರಾತಪತಿ
(ವ್ರಾತ =ವೈದಿಕೇತರ ); ಗಣ (ಜಾನಪದ ಮೂಲ)ರಾಜ.
ನಾಲ್ಕನೆಯ ಪರಿಗಣನೆಯಂತೆ ಆತ ಪ್ರಾಚೀನ,ಸ್ವತಂತ್ರ
ದೇವರು.
ಮಣ್ಣಿನ ಮೂರ್ತಿ ಗಣಪ ಮೃಣ್ಮಯನಾದರೂ ಚಿನ್ಮಯ.
ವಿಸರ್ಜನೆ ಆಗಿ ಮತ್ತೆ ಹುಟ್ಟುವ ಸನಾತನತೆಯ ಸಂಕೇತ.
ಸ್ವಸ್ತಿಕ ಚಿಹ್ನೆಯ ಎರಡು ರೂಪಗಳಾದ ತ್ರಿಕೋಣ ವಿನ್ಯಾಸ
ಮತ್ತು ಚತುರ್ಭುಜ ಸ್ವಸ್ತಿಕಗಳನ್ನು ಗಣಪತಿಯ ಮಂಡಲ
ಗಳೆಂದು ಪರಿಗಣಿಸಲಾಗುತ್ತದೆ.ತ್ರಿಕೋಣ ಮಧ್ಯಗತ ಮತ್ತು
ಬಿಂದು ಸ್ವರೂಪ  ಇವು ಗಣೇಶನ ವಿಶಿಷ್ಟ ನಾಮಧೇಯಗಳು.
ಈ ಪರಿಕಲ್ಪನೆಯು ಸಾಕಾರ ಮತ್ತು ನಿರಾಕಾರಗಳನ್ನು
ಸಂಕೇತ ರೂಪದಲ್ಲಿ ಜತೆ ಗೂಡಿಸುತ್ತದೆ.ಬಿಂದು ಎಂದರೆ
ಅಸ್ತಿ,ನಾಸ್ತಿಗಳ ಸಂಗಮ. ಬಾಳೆಎಲೆ ಮೇಲೆ ಧಾನ್ಯ ಮತ್ತು
ಅದರ ಮೇಲೆ ತೆಂಗಿನಕಾಯಿಯನ್ನಿಡುವುದು ಸ್ವಸ್ತಿಕ.ಇದು
ಅನ್ನ ಮತ್ತು ಪ್ರಕೃತಿಯನ್ನುಗಣೇಶವಾಗಿಸಿದ ಸುಂದರ ಕಲ್ಪನೆ.
ನಮ್ಮ ದೇಹದಲ್ಲಿ ಆರು ಚಕ್ರಗಳಿವೆ.ಒಂದೊಂದು ಚಕ್ರವೂ
ಒಂದೊಂದು ತತ್ತ್ವ ಮತ್ತು ಅಧಿದೇವತೆಯನ್ನು ಹೊಂದಿದೆ.
ಮೂಲಾಧಾರಚಕ್ರ  ”ಭೂ”ತತ್ತ್ವ ಉಳ್ಳದ್ದು.ಇದಕ್ಕೆ ಅಧಿ
ದೇವತೆ ವಿಘ್ನೇಶ್ವರ. ”ಭೂ” ತತ್ತ್ವವೇ ದೇಹವಾಗಿರುವವನೀತ.
ಆದುದರಿಂದ ಹೊನ್ನಿನ ಗಣಪತಿಗಿಂತ ಮಣ್ಣಿನ ಗಣಪತಿಗೆ
ಮಹಿಮೆ ಜಾಸ್ತಿ.ಮೂಲಾಧಾರ ಚಕ್ರವು ಚತುಷ್ಕೋಣವಾಗಿ
ರುವುದರಿಂದ ಚತುಷ್ಕೋಣದಾಕಾರದಲ್ಲಿರುವ ಸ್ವಸ್ತಿಕವು
ಗಣಪತಿಯ ಸಂಕೇತ.
ಗಣಪತಿಯ ವಕ್ರತುಂಡ, ಪ್ರಣವಸ್ವರೂಪವೆನಿಸಿದ ಓಂಕಾರದ
ಸಂಕೇತ.ದೊಡ್ಡಹೊಟ್ಟೆ(ಮಹಾಕಾಯ) ಬ್ರಹ್ಮಾಂಡ ಗರ್ಭ.
ಅದಕ್ಕೆ ಸುತ್ತಿಕೊಂಡಿರುವ ಸರ್ಪ ಕುಂಡಲಿನೀ ಶಕ್ತಿ.ಅವನು
ಏರಿ ಕುಳಿತ ಇಲಿ ತಮಸ್ಸು ಮತ್ತು ರಜೋ ತತ್ತ್ವದ ಸಂಕೇತ.
ಈ ಗುಣ ಗಳನ್ನುಏರಿ ಕುಳಿತವನಾದುದರಿಂದ  ಅವನ ಗುಣ
ಸಾತ್ತ್ವಿಕ.ಮೋದ(ಆನಂದ) ವನ್ನು ಕೊಡುವ ಮೋದಕ ಗಣಪತಿಗೆ
ಮೊದಕವೇ  ನೈವೇದ್ಯ.ಆತ ಪಾಶಾಂಕುಶ ಧರ. ಪಾಶವು
ಸಂಸಾರ ಬಂಧನದ ಸಂಕೇತ.ಅಂಕುಶವು  ಜ್ಞಾನದ ಪ್ರತೀಕ.
ಆತ ಕೈಯಲ್ಲಿ ಹಿಡಿದಿರುವ ಜಂಬೂಫಲವೆಂದರೆ ಗಣಪತಿ ಲಿಂಗ.
ಕಪಿತ್ಥ ಎಂದರೆ ಬಹುಬೀಜಗಳಿರುವ ದಾಳಿಂಬ ಫಲ, ವಿರಾಟ್
ಪ್ರಾಣ ಶಕ್ತಿಯ ಸಂಕೇತ.ಪ್ರಪಂಚದ ವೈಶಿಷ್ಟ್ಯ ಮತ್ತು ಪ್ರಚಂಡ
ಶಕ್ತಿಯ ಪ್ರತೀಕ.
ಗಣಪತಿ ಪೂಜೆಯ ಆಶಯ ಮಣ್ಣನ್ನು ಪೂಜಿಸಬೇಕೆಂಬುದು.
ಗಣಪತಿಯ ದೇಹದೊಳಗಿರುವ ಮೂಲಧಾತು ಮಣ್ಣು.
ಪಾರ್ವತಿ ಎಂದರೆ ಪ್ರಕೃತಿ. ಆಕೆ ಸೃಜಿಸಿದ ಮೃಣ್ಮಯ
ಮೂರ್ತಿ ಗಣಪ.ಆತ ಭೂತಗಣಗಳ ನಾಯಕ. ಭೂತ
ಗಳೆಂದರೆ ಪ್ರಕೃತಿ ಶಕ್ತಿಗಳಾದ ಗಾಳಿ,ನೀರು,ಅಗ್ನಿ.ಆಕಾಶ,
ಮಣ್ಣು.ಈ ಪಂಚ ಭೂತಗಳಿಂದ ಶರೀರೋತ್ಪತ್ತಿಯಾಯಿ
ತೆಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ.
ಭೂತಗಣಗಳ ನಾಯಕನಾದ ಗಣಪತಿಯು ಸಂತುಷ್ಟ
ನಾಗಿ ಹರಸ ಬೇಕಾದರೆ ಅವನ ಭೃತ್ಯರಿಗೆ ನಾವೆಂದೂ
ಕೇಡು ಬಗೆಯ ಬಾರದು.ಪರಿಸರ(ಮಣ್ಣು)ಆರಾಧನೆಯ
ಪ್ರತೀಕವಾದ ಗಣಪತಿ ಪೂಜೆಗಾಗಿ  ಪರಿಸರವನ್ನು
ಕೆಡಿಸಿದರೆ ಪರಿಸರಪ್ರಿಯ ಗಣಪತಿ ಖಂಡಿತಾ ಮೆಚ್ಚಲಾರನು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s