ನಂಬಿಕೆ ಮತ್ತು ಅರ್ಥ.

ಮಂದಿರವನ್ನು ಪ್ರವೇಶಿಸುವಾಗ ಚಪ್ಪಲಿಯನ್ನು
ಹೊರಗೆ ಬಿಟ್ಟು ಒಳಗೆ ಹೋಗುತ್ತೇವೆ. ಅದರ ಅರ್ಥ
ದೇವರ ಬಳಿಗೆ ಹೋಗುವಾಗ ನಮ್ಮ ಅಹಂಕಾರವನ್ನು
ತ್ಯಜಿಸಿ ವಿನೀತರಾಗಿ ಹೋಗುವುದು.
ತಿರುಪತಿಯಲ್ಲಿ ತಲೆಕೂದಲು ಕತ್ತರಿಸಿ ಹರಕೆ ಸಲ್ಲಿಸು
ತ್ತೇವೆ. ದೇವರಿಗೆ ನಮ್ಮ ಅಹಂಕಾರವನ್ನು ಒಪ್ಪಿಸುವುದು
ಎಂಬುದು ಇದರರ್ಥ.
ದೇವರ ಪೂಜೆಯ ಬಳಿಕ ವಿಭೂತಿ ಅಥವಾ ಕುಂಕುಮವನ್ನು
ಬಲಕೈಯ ಉಂಗುರ ಬೆರಳು ಮುಟ್ಟಿ ಹಣೆಗೆ ಹಚ್ಚಿಕೊಳ್ಳುತ್ತೇವೆ.
ಉಂಗುರ ಬೆರಳಿನಲ್ಲಿರುವ  ರಕ್ತನಾಳ ಹೃದಯಕ್ಕೆ ನೇರವಾಗಿ
ಸಂಬಂಧ ಹೊಂದಿದೆ.ಅದು ದೇವರೊಡನೆ ನಮಗಿರುವ
ವಿಶ್ವಾಸವನ್ನು ಪ್ರತಿನಿಧಿಸುತ್ತದೆ.
ಪೂಜಿಸುವಾಗ ಹೂವನ್ನು ದೇವರ ಪದತಲದಿಂದ ಎತ್ತಿ
ಶಿರದ ಕಡೆಗೆ ಮೇಲಕ್ಕೆ ಎಸೆಯಬೇಕಲ್ಲದೆ ದೇವರ ಮುಡಿಯಿಂದ
ಅಡಿಗೆ ಬೀಳುವಂತೆ ಉದುರಿಸುವುದಲ್ಲ.ದೇವರನ್ನು ಆರಾಧಿಸಬೇಕು
ಹೊರತು ಹರಸಲು ನಾವು ಯೋಗ್ಯರಲ್ಲ.
ಮಂದಿರವನ್ನು ಪ್ರವೇಶಿಸಿ ದೇವರನ್ನು ಪೂಜಿಸಿದ ಬಳಿಕ
ಅರ ಘಳಿಗೆ ಅಲ್ಲಿಯೇ ಕುಳಿತು ಕೊಳ್ಳಬೇಕು. ಅಲ್ಲಿ ಪಸರಿ
ಸಿರುವ ಅಧ್ಯಾತ್ಮಿಕ ಮತ್ತು ಧನಾತ್ಮಕ ಚಿಂತನೆ ನಮ್ಮೊಳಗೆ
ವ್ಯಾಪಿಸುತ್ತದೆ.
ಮನೆಯಲ್ಲಿ ಹುಲಿ ಮತ್ತು ಇತರ ಕ್ರೂರ ಪ್ರಾಣಿಗಳ ಚಿತ್ರವನ್ನು
ಗೋಡೆಗೆ ಏರಿಸುವುದರಿಂದ ಋಣಾತ್ಮಕ ಚಿಂತನೆ ಹುಟ್ಟಿ
ಕೊಳ್ಳುತ್ತದೆ.ಮನೆಯ ಮುಂಬಾಗಿಲಿಗೆ ಮುಖಮಾಡಿ ಗಣಪತಿ
ಅಥವಾ ಗಜಲಕ್ಷ್ಮಿಯ ವಿಗ್ರಹವನ್ನು ಗೋಡೆಗೇರಿಸಬೇಕು.
ಮನೆಯೊಳಗೆ ಪ್ರವೇಶಿಸುವ ಋಣಾತ್ಮಕ ಚಿಂತನೆಗಳನ್ನು
ಹೀರಿಕೊಳ್ಳುವ ಶಕ್ತಿ ಈ ವಿಗ್ರಹ ಅಥವಾ ಚಿತ್ರಪಟಕ್ಕಿದೆ.
ಔತಣಕೂಟದಲ್ಲಿ ಎಲೆಯ ಮೇಲೆ ಉಪ್ಪು ಬಡಿಸುವುದು
ವಾಡಿಕೆ.ಹಸಿವಾದಾಗ ಅಥವಾ ಅಡಿಗೆ ಉತ್ತಮವಾಗಿದ್ದಲ್ಲಿ
ಎಲೆ ಚೊಕ್ಕವಾಗಿರುವಂತೆ ಊಟ ಮುಗಿಸುತ್ತೇವೆ.ಇಲ್ಲಿ
ನಾವು ನೆನಪಿಟ್ಟು ಕೊಳ್ಳ ಬೇಕಾದ ಅಂಶವೆಂದರೆ  ಎಲೆಯನ್ನು
ಪೂರ್ತಿಯಾಗಿ ಖಾಲಿಮಾಡದೆ ಸ್ವಲ್ಪ ಉಪ್ಪನ್ನು ಉಳಿಸಿ ಕೊಳ್ಳ
ಬೇಕು.ಯಾರಾದರೂ ಎಂಥಾ ಪ್ರಚಂಡ ಹಸಿವು ಈತ/ಈಕೆಯದು
ಎಂದುಕೊಂಡರೆ ಉಪ್ಪಿಗೆ ದೃಷ್ಟಿ ನಿವಾಳಿಸುವ ಶಕ್ತಿ ಇದೆ.
ಭೋಜನ ಕೂಟದಲ್ಲಿ ಊಟಕ್ಕೆ ಕುಳಿತಾಗ ಬಾಳೆ
ಎಲೆಯನ್ನುನೇರಕ್ಕೆ ಇಟ್ಟು ಹಂಚುತ್ತಾರೆ.ನಾವು
ಅದನ್ನು ಅಡ್ಡಕ್ಕೆ ತಿರುಗಿಸಿ ಇಡಬೇಕು.ಏಕೆಂದರೆ
ಎಲೆಯ ಮಧ್ಯದ ಕಾಲುವೆಯಿಂದ ಪಾಯಸ,
ಸಾಂಬಾರ್  ಇತ್ಯಾದಿ ದ್ರವ ಪದಾರ್ಥಗಳು
ನೇರಕ್ಕೆ ಇಳಿದು ಬಂದು ನಮ್ಮ ಹೊಸಬಟ್ಟೆ ಗಳನ್ನು
ಹೊಲಸು ಮಾಡುತ್ತವೆ .
ಅಡಿಗೆ ಮಾಡುವಾಗ ಚಿತ್ತವನ್ನು ಪ್ರಸನ್ನವಾಗಿಟ್ಟು
ಕೊಳ್ಳಬೇಕು.ಖಿನ್ನತೆ ಹಾಗೂ ಕಲುಷಿತ ಭಾವನೆ
ಗಳು ತುಂಬಿದ್ದ ಮನಸ್ಸಿನಿಂದ ತಯಾರಿಸಿದ
ಆಹಾರ, ಅದನ್ನು ಸೇವಿಸುವವರ ಸ್ವಾಸ್ಥ್ಯವನ್ನು
ಕೆಡಿಸುತ್ತದೆ ಎಂದು ನಂಬುತ್ತಾರೆ.
ವಾಣಿ ಹೆಗ್ಡೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s