ಭೂಮಿ ತಾಯಿ.

ಬೆಳಗಾಗ ನಾನೆದ್ದು  ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯ
ಎದ್ದೊಂದು ಗಳಿಗೇಲಿ ನೆನದೇನ–ಜಾನಪದ ಗೀತೆ.
ಶ್ರೀನಿವಾಸನು ಕೂಡ ತಿರುಮಲೆಗೆ ನೆಲೆ ನಿಂತ;
ಮಣ್ಣಲ್ಲ ಈ ಭೂಮಿ ದೇವ ನೊಲುಮೆ”-ಬೇಂದ್ರೆ.
ಪುಣ್ಯದಾಲಯ ಪೃಥ್ವಿ ,ಸ್ವರ್ಗವದು ಪರದೇಶಿ–ಕುವೆಂಪು.
ಭೂಮಿ ಮಹಾತಾಯಿ.ಆದರೆ ಆಕೆಯದು ಭಯಂಕರ
ಕ್ರೂರ ನಿರ್ಲಿಪ್ತತೆ.–”ಭೂಮಿ ಗೀತ”-ಅಡಿಗರು.
”ಇಳೆಯೆಂದರೆ ಬರಿ ಮಣ್ಣಲ್ಲ; ಪೊರೆವ ತಾಯಿ.
ಆಕೆ ಒಡವೆಯಲ್ಲ;ಉಸಿರಿರುವ ಒಡಲು”–ಬೇಂದ್ರೆ.
”ಹೂವಿನ  ಮಕರಂದ, ಹಣ್ಣಿನ ಮಾಧುರ್ಯ ಹಾಲ್ಹೀಂಗ
ಇನ್ನ ಮನ ಹ್ಯಾಂಗ”(ಭೂಮಿಯ ಎದೆ ಹಾಲು ಇಷ್ಟೊಂದು
ಸವಿಯಾಗಿದೆ.ಮನದ ಹಾಲಿನ ರುಚಿ ಅದೆಷ್ಟು ಮಧುರ
ವಾಗಿರಬಹುದು?)–ಮಧುರ ಚೆನ್ನ.
”ಭೂಮಿಯವ್ವಗೆ ಸಾಸಿರ ಶರಣು.”
ನಾವು ಆಡುವ ಆಟದ ಬಯಲು ಯಾವುದು?
ಕೂಡುವ ಕೂಟದ ನೆಲೆ ಯಾವುದು?
ಮಾಡುವ ಮಾಟದ ಕರಣ ಯಾವುದು?
ಎಲ್ಲವೂ ಭೂಮಿ.
ಅವಳ ಮಡಿಲು ಇರುವೆಗೂ ಆಸರೆ, ಆನೆಗೂ ಆಸರೆ;
ಆಕೆಯ ಶುಭ್ರ ಆಗಸದ  ತೆರೆ, ಆಕೆಯ ನೀಲ ಸಾಗರದ
ಒಡವೆ, ಆಕೆಯ ಸಸ್ಯ ಶ್ಯಾಮಲ ತೊಡುಗೆ ಬಣ್ಣಗೆಡಬೇಕೆ?
ಭಣಗುಟ್ಟ ಬೇಕೆ?
ನಮಗಿರುವುದೊಂದೇ –ಭೂಮಿಯ ಮಡಿಲು.
ಆ ತಂಪಿನಾಸರೆ ತಪ್ಪಿದರೆ ಬದುಕಿನ ಸೊಗಸು ಎಲ್ಲಿ?
”ಸಮುದ್ರ ವಸನೇ, ದೇವೀ, ಪರ್ವತ ಸ್ತನ ಮಂಡಿತೇ ,
ವಿಷ್ಣು ಪತ್ನೀ ನಮಸ್ತುಭ್ಯಂ,ಪಾದ ಸ್ಪರ್ಶಂ ಕ್ಷಮಸ್ವಮೇ .”
-ಪ್ರಾತಃ ಸ್ಮರಣೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s