ಕನ್ನಡ ವಿಭಾಗ.

೧)ಚಿಂತನ
ಓದನ್ನು ಅಮೃತ,ಅನ್ನ, ಅಮಲು,ಅಮೇಧ್ಯ  ಎಂದು
ವರ್ಗೀಕರಿಸ ಬಹುದು. ಶಾಸ್ತ್ರ ಗ್ರಂಥ ಗಳು, ಸಂತರ
ಚರಿತ್ರೆ, ಅವರ ಬೋಧೆ,ಮುಂತಾದುವು  ಜೀವನವನ್ನು
ಪವಿತ್ರಗೊಳಿಸಬಲ್ಲ ”ಅಮೃತ” ತರದ ಓದು.ಲೆಕ್ಕ, ಚರಿತ್ರೆ
ಮುಂತಾದ ಓದು ಅನ್ನದಂತೆ  ನಮ್ಮ ಜೀವನ ನಡೆಸಲು
ಅಗತ್ಯ.ಕತೆ, ಕಾದಂಬರಿಗಳು ಅಮಲಿನಂತೆ. ಕಾಮದ
ಭಾವನೆ ತುಂಬಿಸುವ ಪುಸ್ತಕಗಳನ್ನು  ಮಲ, ವಿಷವನ್ನು
ದೂರವಿಟ್ಟಂತೆ ದೂರವಿಡಬೇಕು.—ಕೋಟ ವಾಸುದೇವ
ಕಾರಂತರು.
೨)ಕವಿತೆ
ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು.
ಬಂತಲ್ಲ ಬೇಸಿಗೆ, ಕೆಟ್ಟ ಬಿಸಿಲೆಂದರು.
ಮಳೆ ಬಿತ್ತೋ, ”ಬಿಡದಲ್ಲ  ಶನಿ” ಎಂಬ ಟೀಕೆ.
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.
—ಕೆ.ಎಸ್.ನರಸಿಂಹ ಸ್ವಾಮಿ.
೩)ಕನ್ನಡ ನಾಣ್ಣುಡಿ
ತಂಗಳನ್ನ ತಾಕತ್ತಿನ ಗುಡಾಣ.
ಕುರುವಿನ ಮೇಲೆ ಬರೆ.
ಮಕ್ಕಳ ಬರಹವನ್ನು ತಿದ್ದ ಬಹುದು;
ಹಣೆಬರಹ ವನ್ನಲ್ಲ.
ಬಳಸದಿದ್ದರೆ ಕಳೆದು ಕೊಳ್ಳುವಿರಿ
ಗಟ್ಟಿ ತಾಳಕ್ಕೆ ಗೆಜ್ಜೆ ಮೇಳ.
ಕಹಿ ಅನುಭವವೇ ಕಲ್ಯಾಣದ ಮೆಟ್ಟಿಲು.
ಹೀನ ಸುಳಿ ಬೋಳಿಸಿದರೆ ಹೋಗದು.
ಮರೆ ಮಾಚಿದ ಸತ್ಯ ತನ್ನ ಸೇಡನ್ನು
ತೀರಿಸಿ ಕೊಳ್ಳುತ್ತದೆ.
ಕೊಚ್ಚೆಗೆ ಕಲ್ಲು ಎಸೆದರೆ ಮುಖಕ್ಕೆ ಸಿಡಿಯದಿರುವುದೇ?
೪)ನಿಮಗೆ ಗೊತ್ತೇ ?
ನಾಯಿ ಗಳು ಬಣ್ಣ ಗಳನ್ನು ಗುರ್ತಿಸಲಾರವು.
ಸೊಳ್ಳೆಗಳಿಗೆ ೪೭ ಹಲ್ಲುಗಳಿವೆ.
ತಿಮಿಂಗಿಲಗಳಿಗೆ ವಾಸನಾ ಗ್ರಹಣ ಶಕ್ತಿ ಇಲ್ಲ.
Octopus  ನ  ರಕ್ತ ನೀಲಿ ಬಣ್ಣದ್ದಾಗಿರುತ್ತದೆ.
ಆನೆಯ ಮರಿಗೆ ಅದರ ತಾಯಿ ಮಾತ್ರ
ಹಾಲೂಡಿಸುವುದಿಲ್ಲ; ಹಾಲಿರುವ ಇತರ ಹೆಣ್ಣಾನೆ
ಗಳು ಉಣಿಸುತ್ತವೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s