ಇಂದಿನ ಭಾರತ.

ಭಾರತವಿಂದು  ಗಾಂಧಿ ಕನವರಿಸಿದ  ರಾಮರಾಜ್ಯವಲ್ಲ,
ಗಾಂಧಿ ಅನುಯಾಯಿಗಳಿಗೆ ಪ್ರಶಸ್ತ ಕಾಲವಿದಲ್ಲ.
ಒಂದು ಸಮುದಾಯದವರಿಗೆ ಕುಡಿತ,ಜುಗಾರಿ ಬೇಕಿಲ್ಲ;
ಇನ್ನೊಂದು ಸಮುದಾಯದವರಿಗೆ ಗೋ ಹತ್ಯೆ  ಸಲ್ಲ;
ಕೋಮು ಸಾಮರಸ್ಯದತ್ತ ಸರಕಾರದ ಒಲವೆಲ್ಲ;
ಹಾಗಾಗಿ,ಕುಡಿತ,ಜುಗಾರಿ,ಗೋ ಹತ್ಯೆ ಯಾವುದಕ್ಕೂ ನಿಷೇಧವಿಲ್ಲ.
ಅಪರಾಧಿ ಅಥವಾ ಆರೋಪಿ ಇಂದು ಜೈಲಿನಲ್ಲಿ ಕೊಳೆಯಬೇಕಿಲ್ಲ;
ಬಿಡುಗಡೆಗೆ ಕಾನೂನು ಪ್ರಕಾರ ಜಾಮೀನು ಇದೆಯಲ್ಲ?
ರಾಜಕೀಯವಾಗಿದೆ ಇಂದು ನಾಟಕ ರಂಗ;
ದಿನ ದಿನವೂ ರಂಗು ರಂಗಿನ ರಸ ಪ್ರಸಂಗ;
ಜನ ಸಾಮಾನ್ಯರಿಗೆ ಜೀವನವಾಗಿದೆ  ರಣರಂಗ.
ಮತದಾರ ಇಂದು ಇಂಗು ತಿಂದ ಮಂಗ ;
ಸರಕಾರದಿಂದ ತೀವ್ರ ಆಶಾ ಭಂಗ.
ವಾಣಿ ಹೆಗ್ಡೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s