ಕನ್ನಡ ವಿಭಾಗ.

೧)ವಕ್ರೋಕ್ತಿ ವಿಲಾಸ.
”ಬಾಗಿಲನು ತೆರೆದು ಸೇವೆಯನು  ಕೊಡೊ ಹರಿಯೇ ,
ಕೂಗಿದರೂ ಕರೆ ಕೇಳಲಿಲ್ಲವೇ ? ನರಹರಿಯೇ ”-ಕನಕದಾಸರು.
ವಕ್ರೋಕ್ತಿ:”ನರ-ಹರಿಯುವಂತೆ ಕೂಗಿದರೂ
ನಿನಗೆ ಕೇಳಿಸ ಲಿಲ್ಲವೇ?-ಡಾ.ಎಚ್. ಎಸ್.ವೆಂಕಟೇಶಮೂರ್ತಿ.
೨)ನಗೆ ಗುಳಿಗೆ :
”ನನಗಂತೂ ಸಾವಿನ ಭಯಾನೇ ಇಲ್ಲ,ನೋಡಪಾ –
ಯಾಕಂದ್ರಾ , ನಾವು ಇರೋ ತನಕ ಸಾವು ಬರೋಣುಲ್ಲ!
ಸಾವು ಬಂದಾಗ ನಾವು ಇರೋಣಿಲ್ಲ!”-ಬೇಂದ್ರೆ.
೩)ಸುಭಾಷಿತ :
ಕಾದ ಕಬ್ಬಿಣದ ಮೇಲೆ ಬಿದ್ದ ನೀರ
ಹನಿ ಹೇಳ ಹೆಸರಿಲ್ಲದೆ
ಇಂಗಿ ಹೋಗುತ್ತದೆ.ಅದೇ ಹನಿ ಚಿಪ್ಪಿನೊಳಗೆ ಬಿದ್ದಾಗ
ಮುತ್ತಾಗಿ ಆಭರಣವಾಗುತ್ತದೆ.ಸಹವಾಸದಿಂದ ವಸ್ತು
ಔನ್ನತ್ಯ ಯಾ ಹಾನಿ ಪಡೆಯುತ್ತದೆ.-ಪೆರ್ಲ ಕೃಷ್ಣ ಭಟ್.
೪)ನಿಮಗೆ ಗೊತ್ತೇ?
ಭೂಮಧ್ಯ ರೇಖೆಯು ಹಾಡು ಹೋಗುವ ರಾಷ್ಟ್ರ-ತಾಂಜನಿಯಾ.
೫)ಆರೋಗ್ಯ ಸಂಪದ
ಕಾಮಾಲೆ ಇರುವಾಗ,ಅನನಾಸಿನ  ಹಣ್ಣಿನ ಹೋಳು ಗಳನ್ನು
ಜೇನುತುಪ್ಪದಲ್ಲಿ ನೆನೆಸಿ ಒಂದು ವಾರದವರೆಗೆ ಬೆಳಿಗ್ಗೆ ಹಾಗೂ
ರಾತ್ರೆ ಸೇವಿಸ ಬೇಕು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s