ಕನ್ನಡ ವಿಭಾಗ.

೧)ನಗೆ ಗಡಲು:
ಹುಡುಗ:ಪ್ರಿಯೆ,ನಿನ್ನ ಹೃದಯ ವೀಣೆ ನಾನು ನುಡಿಸಲೇ ?
ಹುಡುಗಿ:ಪ್ರಿಯಾ,ನಿನ್ನ ಖಾಲಿ ತಲೆಯ ಮದ್ದಲೆ ನಾನು ಬಾರಿಸಲೇ?
೨)ಆರೋಗ್ಯ ಸಂಪದ
ದೇವಸ್ಥಾನಗಳಲ್ಲಿ  ತೀರ್ಥವನ್ನು ಪಂಚಲೋಹದ ಪಾತ್ರೆಯಲ್ಲಿ
ಕರ್ಪೂರವನ್ನು ಮಿಶ್ರಣ ಮಾಡಿ ಇಟ್ಟಿರುತ್ತಾರೆ.ಈ ನೀರು
ಕ್ರಿಮಿ ನಾಶಕ.ದೇವರ ಹೆಸರಿನಲ್ಲಿ ತೆಗೆದು ಕೊಳ್ಳುವ  ತೀರ್ಥ
ನಮ್ಮ ಶರೀರದಲ್ಲಿ ಮನೆ ಮಾಡಿ ಕೊಂಡಿರುವ ಅನೇಕ
ಸೂಕ್ಷ್ಮ ಕ್ರಿಮಿ ಗಳನ್ನು ನಾಶ ಮಾಡಿ ದೇಹವನ್ನು ರೋಗ
ಗಳಿಂದ ರಕ್ಷಿಸುತ್ತದೆ.
೩)ಆಧ್ಯಾತ್ಮ ಚಿಂತನ
ಭೌತಿಕ ವಾದುದೆಲ್ಲ ಕಾಲಾಧೀನವಾದುದು.
ಪ್ರಾಯದ ಸೀಮೆ ಯೊಳಗೆ ಬಂಧಿತ ವಾದುದು.
ಪ್ರಾಯ ಪ್ರಧಾನವಲ್ಲ.ಸಂಸ್ಕಾರ ಪ್ರಧಾನ.
ದಿವ್ಯತ್ವದ ಅನುಭವ ಮಾನವತ್ವದ ಮೂಲಕ
ಸುಲಭ.ಅಭಿಪ್ರಾಯ ಮನ್ನಣೆಗೆ ಪಾತ್ರ ವಾಗ
ಬೇಕಾದರೆ ನಡೆ ನುಡಿಯಲ್ಲಿ ಏಕತೆ,ಸಾತ್ವಿಕ
ಗುಣ ಸಂಪನ್ನತೆ, ಜ್ಞಾನ ವಿಸ್ತಾರ ಇರಬೇಕು.
ಹೊರತು ವಯಸ್ಸೊಂದೇ ಆಧಾರವಲ್ಲ.
—-ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿ.
೪)ಜನಪದ ಸಂಸ್ಕೃತಿಯಲ್ಲಿ ಹೆಣ್ಣು.
(ಶೋಷಣೆಯ ಪ್ರತೀಕ )
ಅತ್ತಿಯ ಮನಿಯಾಗ ಮುತ್ತಿ ನ್ಹಾಂಗಿ ರಬೇಕು.
ಹೊತ್ತಾಗಿ ನೀಡಿದರ ಉಣಬೇಕು|ಕಂದಮ್ಮ
ಹೆತ್ತಮನಿಗೆ ಹೆಸರು ತರಬೇಕು|
ಅತ್ತಿ ಮಾವಗಂಜಿ, ಸುತ್ತೇಳು  ನೆರೆಗಂಜಿ
ಮತ್ತೆ ನಲ್ಲನ ದನಿಗಂಜಿ |ನಡದರ
ಎಂಥ ಉತ್ತಮರ ಮಗಳೆಂದ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s