ತುಳು ಭಾಷೆ ಮತ್ತು ಪರಂಪರೆ.

ತುಳು ಭಾಷೆಯಲ್ಲಿ  ಗ್ರಾಂಥಿಕ ಸಾಹಿತ್ಯ ಪರಂಪರೆ ಇದೆ.
ಮಂಗಳೂರು ವಿ.ವಿ. ಪ್ರಕಟಿಸಿದ ”ಭಾಗವತೋ”
ಪ್ರಾಚೀನ ಕಾವ್ಯ,ತುಳು ಶಕ್ತಿಯುತ  ದ್ರಾವಿಡ ಭಾಷೆ
ಎಂಬ ಕಾಲ್ಡ್ ವೆಲರ (Robert  Caldwel) ಮಾತನ್ನು
ಖಚಿತ ಪಡಿಸಿದೆ.ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣದ
ಪಿತಾಮಹ -ರಾಬರ್ಟ್ ಕಾಲ್ಡ್ ವೆಲ್.
ಪ್ರಾಚೀನ ಸಂಸ್ಕೃತ  ಭಾಷೆಗೆ ಸ್ವಂತ ಲಿಪಿ ಇಲ್ಲ.ಪ್ರಸ್ತುತ
ನಾವು ಓದುವ ಸಂಸ್ಕೃತ ಲಿಪಿಯು ನಾಗರಿಯಾಗಿದೆ.
ಮಲಯಾಳ  ಭಾಷೆಗೂ ಸ್ವಂತ ಲಿಪಿ ಇಲ್ಲ.ಅದು
ತುಳು ಲಿಪಿಯಾಗಿದೆ.ತುಳು ಭಾಷೆಯನ್ನು ಬರೆಯಲು
ತುಳು ಲಿಪಿ ಉಪಯೋಗವಾಗದಿದ್ದರೂ, ತುಳುವರು
ಸಂಸ್ಕೃತದ ಮಂತ್ರಗಳನ್ನು ಬರೆಯಲು ತುಳು ಲಿಪಿ
ಬಳಸಿಕೊಂಡರು. ಮುಂದೆ ತುಳುವಿನ ಪುರೋಹಿತರು
ಕೇರಳಕ್ಕೆ ಹೋಗಿ ”ಪೋತಿ” ಗಳಾದರು. ಅವರು
ಹೋಗುವಾಗ ಮಂತ್ರಗಳನ್ನು ತುಳು ಲಿಪಿಯಲ್ಲಿ
ಬರೆದುಕೊಂಡು ಹೋಗಿದ್ದರು. ಮುಂದೆ ಅದೇ ಲಿಪಿ
ಮಲಯಾಳವಾಯಿತು.ತುಳು ಲಿಪಿಯನ್ನು ಅತ್ಯಂತ
ನಾಜೂಕಾಗಿ ಸೃಷ್ಟಿಸಲಾಗಿದೆ. ತುಳು ಲಿಪಿಯಲ್ಲಿ
ಎಲ್ಲಿಯೂ  ಉದ್ದದ ಗೆರೆಗಳು ಬರುವುದಿಲ್ಲ. ಬಳ್ಳಿ
ಅಕ್ಷರಗಳು ತಾಳೆಗರಿಯಲ್ಲಿ  ಚೆನ್ನಾಗಿ ಹಿಡಿಯುತ್ತವೆ.
ಉದ್ದ ಮತ್ತು ನೇರವಾಗಿ  ಬರೆದರೆ ತಾಳೆ ಹಾಳೆಯು
ಹರಿಯುತ್ತದೆ ಎಂಬ ಉದ್ದೇಶಕ್ಕಾಗಿ  ತುಳುಲಿಪಿಯನ್ನು
ನಾಜೂಕಾಗಿ  ಸೃಷ್ಟಿ ಸಲಾಗಿದೆ.
–ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ.
”ತುಪ್ಪಶನ ಉಂಬಲೇ  ತುಳುನಾಡಿಂಗೋಯೆಕ್ಕು,”
”ಅಕ್ಕಿ ಮೇಲೆ ಬರೆ ಇಲ್ಲೆ;ತುಳುನಾಡ ಮಕ್ಕಳ ಮೇಲೆ
ಕಲೆ ಇಲ್ಲೈ”——-ಜನಪದ ಕವಿ.
ಬಂಟ ಸಮುದಾಯದ ಪ್ರಪ್ರಥಮ ಮಹಿಳಾ ಪೈಲಟ್
(pilot )–ಕೃತಿ .ಆರ್.ಶೆಟ್ಟಿ (Kruti  R . ಶೆಟ್ಟಿ)
”ಸುಭಟ ರ್ಕಳ್ , ಕವಿಗಳ್, ಸುಪ್ರಭುಗಳ್,
ಚೆಲ್ವರ್ಕಳ್, ಭಜನರ್ಕಳ್ (ದೈವ ಭಕ್ತರು )
ಗುಣಿಗಳ್,ಅಭಿಮಾನಿ ಗಳತ್ಯುಗ್ರರ್,ಗಭೀರ ಚಿತ್ತರ್,
ವಿವೇಕಿಗಳ್, ನಾಡವರ್ಗಳ್” ಎಂದು  ನೃಪತುಂಗ
ತನ್ನ ”ಕವಿರಾಜ ಮಾರ್ಗ” ದಲ್ಲಿ ತುಳುವರನ್ನು
ವರ್ಣಿಸಿದ್ದಾನೆ.ಜಗತ್ತಿನಲ್ಲಿ ಸುಮಾರು ೭೫  ಲಕ್ಷ ದಿಂದ
ಒಂದು ಕೋಟಿಯ ವರೆಗೆ ತುಳುಭಾಷಿಗರಿದ್ದಾರೆ.

ಮೂಲ:ಸಂಗ್ರಹ..

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s