ಹಸ್ತಾಂತರ.

ಬಾನಿನ ನೀಲ ಪಟದಲ್ಲಿ ಬಣ್ಣ, ಆಕಾರ ಬದಲಿಸುತ್ತ
ಚಲಿಸುವ ಮೋಡಗಳ  ಚಿತ್ರ ವಿಚಿತ್ರ ದೃಶ್ಯ,
ಭೂಮಿಯ ರಂಗಮಂಟಪದಲ್ಲಿ ಹಸಿರು ರೇಶಿಮೆಯುಟ್ಟು,
ಹೂವಿನಾಭರಣ ತೊಟ್ಟು, ಬೀಸುವ ಮಂದಾನಿಲಕ್ಕೆ
ಬಳುಕುತ್ತ  ನಲಿವ ತರು ಲತೆಗಳ ನಾಟ್ಯ,
ರೆಕ್ಕೆ ಬಡಿಯುತ್ತ ಹಾರುವ ಕಪ್ಪು-ಬಿಳಿ ಹಕ್ಕಿಗಳ ಹಿಂಡು,
ಆ ದೇವರ  ಹಸ್ತಾಕ್ಷರವಿದೆಂದು ಕವಿಯೋಬ್ಬನೆಂದ.
ಇಂಥ ಸುಂದರ ಪ್ರಕೃತಿ , ಇದುವೇ  ಆ ದೇವನ ಭಾವಚಿತ್ರ;
ಇದಕೆ ಮಸಿ ಬಳಿಯ ಬಲ್ಲವ ,ಮಾನವ ಮಾತ್ರ.
ಈ ಪ್ರಕೃತಿ  ನಮಗೆ ಹಿರಿಯರ ದೇಣಿಗೆ.
ಇದನು ಕಲುಷಿತ ಗೊಳಿಸದೆ ಹಸ್ತಾಂತರಿಸ ಬೇಕಿದೆ,
ಮುಂದಿನ  ನಮ್ಮ ಯುವ ಪೀಳಿಗೆಗೆ .
ಬಂಧುಗಳೇ,ಕಡಿದು ಮರಗಳ ,ನಿರ್ಮಿಸದಿರಿ ಸ್ಮಶಾನ;
ಹಣ್ಣಿನ ಮರ ನೆಟ್ಟು , ಹೂ ತೋಟ ಬೆಳೆಸಿ ,
ನಿರ್ಮಿಸಿ ಹಸಿರಿನ  ನಂದನವನ, ಉದ್ಯಾನ.
ವಾಣಿ ಹೆಗ್ಡೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s