ಚಿನ್ನ.

ಚಿನ್ನ ಜಗಮಾನ್ಯ ದ್ರವ್ಯ.ಸರ್ವ ಕಾಲಿಕ ಮೌಲ್ಯವುಳ್ಳ
ಸ್ಥಿರ ಸಂಪತ್ತು.ಚಿನ್ನವನ್ನು ಹೊಂದುವಲ್ಲಿ ವೃದ್ಧಿಯೂ
ಇದೆ.ಉಳಿತಾಯವೂ ಇದೆ.ಚಿನ್ನಕ್ಕೆ ಆಪಧ್ಧನ ಎಂಬ
ಗೌರವವೂ ಇದೆ.ಚಿನ್ನ ದೇಶದ ಸಂಪತ್ತು ಅಳೆಯುವ
ಮಾನದಂಡ.ಚಿನ್ನಾಭರಣ ಮಹಿಳೆಯರ ಉಸಿರು.
ಉತ್ತಮ ಸ್ವಭಾವಿಗಳನ್ನು ಅಪರಂಜಿ ಚಿನ್ನಕ್ಕೆ ಹೋಲಿಸು
ತ್ತಾರೆ.ಉದಾ:ಚಿನ್ನದಂಥಹ ವ್ಯಕ್ತಿತ್ವ,ಬಂಗಾರದಂತಹ
ಮನಸ್ಸು ಇತ್ಯಾದಿ.ಹಳದಿ ಬಣ್ಣದ ಲೋಹ ಸುವರ್ಣವು
ಪರಿಶುಧ್ಧವಾಗಿದ್ದು ಪವಿತ್ರವೆಂದು ಧರ್ಮಶಾಸ್ತ್ರಗಳು
ಹೇಳುತ್ತವೆ.ಸೂರ್ಯನಿಂದ ಅಗ್ನಿ, ಅಗ್ನಿಪುತ್ರ ಹಿರಣ್ಯ.
ಆದುದರಿಂದ ಚಿನ್ನ(ಹಿರಣ್ಯ)ಪರಿಶುಧ್ಧ.
ಸುವರ್ಣ(ಚಿನ್ನ)ದಾನದಿಂದ  ಅಪರಿಹಾರ
ದೋಷಗಳಿಂದ  ಮುಕ್ತಿ.ಚಿರಂತನ ಚಿದಾನಂದದಾಯಕ
ಚಿಂತಾಮಣಿ- ”ಚಿನ್ನ”.ಚಿಂತಿತ ಇಷ್ಟಾರ್ಥ ಸಿಧ್ಧಿದಾಯಕ,
ಚಿರಾಯುವಾಗಲು ಪೂರಕ, ಮನಸ್ಸಿಗೆ ಪ್ರಿಯ; ವಾಕ್
ಶುಧ್ಧಿ, ದೇಹಪುಷ್ಟಿ ,ಮೇಧಾಶಕ್ತಿ  ಹೆಚ್ಚಿಸುವ ಹೊನ್ನನ್ನು
ಆಭರಣವಾಗಿ ಧರಿಸಿದಾಗ ಸ್ಥೈರ್ಯ ಹೆಚ್ಚುವುದು.
ಔಷಧಿಯಾಗಿ ಉಪಯೋಗಿಸುವುದರಿಂದ ಯೌವನ
ಪ್ರಾಪ್ತಿ,ಉನ್ಮಾದ ನಿಯಂತ್ರಕ,ವಿಷಹರ, ತ್ರಿದೋಷ
ಪರಿಹಾರ ಸಾಧ್ಯವೆಂಬುದು ವೈದ್ಯಕೀಯ ಗ್ರಂಥಗಳ
ಉಲ್ಲೇಖ.ಭಾರತೀಯ ಸಂಸ್ಕೃತಿಯಲ್ಲಿ ಹಳದಿ ಬಣ್ಣವು
ಮಂಗಳಪ್ರದವೆಂದು ಪರಿಗ್ರಹಿಸಲ್ಪಟ್ಟಿದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s